





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ತಲೆಯ ಒಂದು ಭಾಗವನ್ನು ಬೋಳಿಸಿ ಇನ್ನೊಂದು ಭಾಗವನ್ನು ಬೋಳಿಸದಿರುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ."
Al-Bukhari and Muslimತಲೆಯ ಒಂದು ಭಾಗವನ್ನು ಬೋಳಿಸಿ ಇನ್ನೊಂದು ಭಾಗವನ್ನು ಬೋಳಿಸದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ. ಈ ವಿರೋಧವು ಪುರುಷರಲ್ಲಿ ಹಿರಿಯರು ಮತ್ತು ಕಿರಿಯರೆಲ್ಲರಿಗೂ ಅನ್ವಯವಾಗುತ್ತದೆ. ಮಹಿಳೆಯರು ತಲೆಗೂದಲನ್ನು ಬೋಳಿಸಬಾರದು.
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್ಗಳ ಮಧ್ಯೆ "ಅಲ್ಲಾಹುಮ್ಮಗ್ಫಿರ್ ಲೀ, ವರ್ಹಮ್ನೀ, ವಆಫಿನೀ, ವಹ್ದಿನೀ, ವರ್ಝುಕ್ನೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನಗೆ ದಯೆತೋರು, ನನಗೆ ಸೌಖ್ಯವನ್ನು ನೀಡು, ನನಗೆ ಸನ್ಮಾರ್ಗವನ್ನು ತೋರಿಸು ಮತ್ತು ನನಗೆ ಜೀವನೋಪಾಯವನ್ನು ದಯಪಾಲಿಸು) ಎಂದು ಹೇಳುತ್ತಿದ್ದರು.
Ibn Maajahಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ನಲ್ಲಿ ಎರಡು ಸುಜೂದ್ಗಳ ಮಧ್ಯೆ ಮುಸಲ್ಮಾನನಿಗೆ ಅತ್ಯಂತ ಅಗತ್ಯವಿರುವ ಮತ್ತು ಇಹಲೋಕ ಹಾಗೂ ಪರಲೋಕದ ಎಲ್ಲಾ ಒಳಿತುಗಳನ್ನು ಒಳಗೊಂಡಿರುವ ಈ ಐದು ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದರು. ಈ ಪ್ರಾರ್ಥನೆಯು ಕ್ಷಮೆಯಾಚನೆ, ಪಾಪಗಳನ್ನು ಮನ್ನಿಸುವುದು, ದಯೆ ತೋರುವುದು, ಸಂಶಯಗಳು, ಮೋಹಗಳು, ಕಾಯಿಲೆಗಳು ಮತ್ತು ರೋಗಗಳಿಂದ ಸೌಖ್ಯವನ್ನು ಪಡೆಯುವುದು, ಸನ್ಮಾರ್ಗ ಮತ್ತು ಸತ್ಯ ಮಾರ್ಗವನ್ನು ತೋರಿಸಿಕೊಡಲು ಪ್ರಾರ್ಥಿಸುವುದು ಮತ್ತು ಆ ಮಾರ್ಗದಲ್ಲಿ ದೃಢವಾಗಿ ನಿಲ್ಲುವುದು, ಸತ್ಯವಿಶ್ವಾಸ, ಜ್ಞಾನ, ಸತ್ಕರ್ಮ ಮತ್ತು ಧರ್ಮಸಮ್ಮತ ಹಾಗೂ ಶುದ್ಧವಾದ ರೀತಿಯಲ್ಲಿ ಹಣವನ್ನು ಸಂಪಾದಿಸುವುದು ಮುಂತಾದ ಎಲ್ಲವನ್ನೂ ಒಳಗೊಂಡಿದೆ.
ಸೌಬಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುತ್ತಿದ್ದರು. ನಂತರ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” (ವರದಿಗಾರರಲ್ಲಿ ಒಬ್ಬರಾದ) ವಲೀದ್ ಹೇಳುತ್ತಾರೆ: ನಾನು ಔಝಾಈರೊಡನೆ ಕೇಳಿದೆ: "ನಾನು ಕ್ಷಮೆಯಾಚನೆ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅಸ್ತಗ್ಫಿರುಲ್ಲಾಹ್, ಅಸ್ತಗ್ಫಿರುಲ್ಲಾಹ್ ಎಂದು ಹೇಳುವುದು."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಅಸ್ತಗ್ಫಿರುಲ್ಲಾಹ್ (ನಾನು ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತೇನೆ) ಎಂದು ಹೇಳುತ್ತಿದ್ದರು. ನಂತರ ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಹಿಮೆಪಡಿಸುತ್ತಾ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” ಅಲ್ಲಾಹು ಅವನ ಗುಣಲಕ್ಷಣಗಳ ವಿಷಯದಲ್ಲಿ ಸುರಕ್ಷಿತನು ಮತ್ತು ಪರಿಪೂರ್ಣನು. ಅವನಿಗೆ ಯಾವುದೇ ಕುಂದು-ಕೊರತೆಗಳು ಅಥವಾ ಅಪೂರ್ಣತೆಗಳಿಲ್ಲ. ಅದೇ ರೀತಿ, ಈ ಪ್ರಾರ್ಥನೆಯಲ್ಲಿ ಇಹಲೋಕದ ಮತ್ತು ಪರಲೋಕದ ಎಲ್ಲಾ ಕೆಡುಕುಗಳಿಂದ ಅಲ್ಲಾಹನಲ್ಲಿ ಮಾತ್ರ ಪ್ರಾರ್ಥಿಸಲಾಗುತ್ತದೆ. ಪರಮ ಪರಿಶುದ್ಧನಾದ ಅವನ ಒಳಿತುಗಳು ಇಹಲೋಕದಲ್ಲೂ ಪರಲೋಕದಲ್ಲೂ ಅತ್ಯಧಿಕವಾಗಿವೆ. ಅವನು ಮಹಿಮೆ ಮತ್ತು ಒಳಿತುಗಳ ಒಡೆಯನಾಗಿದ್ದಾನೆ.
ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:ನನಗೆ ಮೂಲವ್ಯಾಧಿ ಇತ್ತು ಆದ್ದರಿಂದ ನಾನು ನಮಾಝ್ ನಿರ್ವಹಿಸುವ ಬಗ್ಗೆ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದಾಗ, ಅವರು ಹೇಳಿದರು: "ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ."
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಮಾಝನ್ನು ಮೂಲವಾಗಿ ನಿಂತುಕೊಂಡೇ ನಿರ್ವಹಿಸಬೇಕಾಗಿದೆ. ಆದರೆ ನಿಂತು ನಮಾಝ್ ನಿರ್ವಹಿಸಲು ಸಾಧ್ಯವಾಗದಿದ್ದರೆ, ಕುಳಿತು ನಿರ್ವಹಿಸಬೇಕು. ಕುಳಿತು ನಮಾಝ್ ನಿರ್ವಹಿಸಲು ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಬೇಕು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಒಬ್ಬ ಅಂಧ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಮಸೀದಿಗೆ ಬರಲು ದಾರಿ ತೋರಿಸುವವರು ಯಾರೂ ಇಲ್ಲ." ನಂತರ ಮನೆಯಲ್ಲೇ ನಮಾಝ್ ನಿರ್ವಹಿಸಲು ರಿಯಾಯಿತಿ ನೀಡಬೇಕೆಂದು ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಂತಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ರಿಯಾಯಿತಿ ನೀಡಿದರು. ಆ ವ್ಯಕ್ತಿ ಹೊರಡುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಕರೆದು ಕೇಳಿದರು: "ತಮಗೆ ನಮಾಝ್ಗೆ ಕರೆಯುವ ಅಝಾನ್ ಕೇಳುತ್ತದೆಯೇ?" ಆ ವ್ಯಕ್ತಿ ಹೌದು ಎಂದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನೀವು ಅದಕ್ಕೆ ಉತ್ತರ ನೀಡಬೇಕು."
Muslimಒಮ್ಮೆ ಒಬ್ಬ ಅಂಧ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಐದು ವೇಳೆಯ ನಮಾಝ್ಗಳಿಗೆ ನನ್ನ ಕೈ ಹಿಡಿದು ಮಸೀದಿಗೆ ಕರೆತರಲು ನನಗೆ ಯಾವುದೇ ಸಹಾಯಕರಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಮೂಹಿಕ ನಮಾಝ್ (ಜಮಾಅತ್) ಗೆ ಹಾಜರಾಗದಿರಲು ತನಗೆ ರಿಯಾಯಿತಿ ನೀಡಬೇಕೆಂದು ಅವರು ಬಯಸಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ರಿಯಾಯಿತಿ ನೀಡಿದರು. ಆದರೆ ಆ ವ್ಯಕ್ತಿ ಅಲ್ಲಿಂದ ಹೊರಡುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಕರೆದು ಕೇಳಿದರು: "ತಮಗೆ ನಮಾಝ್ಗೆ ಕರೆಯುವ ಅಝಾನ್ ಕೇಳುತ್ತದೆಯೇ?" ಆ ವ್ಯಕ್ತಿ ಹೌದು ಎಂದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನೀವು ನಮಾಝ್ಗೆ ಕರೆ ನೀಡುವವನಿಗೆ ಉತ್ತರ ನೀಡಬೇಕು."
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನವನ್ನು (ಖುತ್ಬತುಲ್ ಹಾಜ) ಕಲಿಸಿಕೊಟ್ಟರು: "ನಿಶ್ಚಯವಾಗಿಯೂ ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ನಾವು ಅವನಲ್ಲಿ ಸಹಾಯ ಬೇಡುತ್ತೇವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ನಾವು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ. "ಓ ಜನರೇ! ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ಅವನು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು. ಅವರಿಬ್ಬರಿಂದ ಅನೇಕ ಪುರುಷರನ್ನು ಮತ್ತು ಸ್ತ್ರೀಯರನ್ನು ಹಬ್ಬಿಸಿದನು. ಯಾರ ಬಗ್ಗೆ ನೀವು ಪರಸ್ಪರ ಕೇಳುತ್ತಿರುವಿರೋ ಆ ಅಲ್ಲಾಹನನ್ನು ಮತ್ತು ಕುಟುಂಬ ಸಂಬಂಧಗಳನ್ನು ಭಯಪಡಿರಿ. ಅಲ್ಲಾಹು ನಿಮ್ಮನ್ನು ಸದಾ ಗಮನಿಸುತ್ತಲೇ ಇದ್ದಾನೆ." [ನಿಸಾಅ್ 1]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಮರಣಹೊಂದುವಂತಾಗದಿರಲಿ." [ಆಲು ಇಮ್ರಾನ್:102]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತನ್ನೇ ಆಡಿರಿ. ಅವನು ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಮಹಾ ವಿಜಯವನ್ನು ಪಡೆದನು." [ಅಹ್ಝಾಬ್:70-71].
Ibn Maajahಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನ (ಖುತ್ಬತುಲ್ ಹಾಜ) ಕಲಿಸಿಕೊಟ್ಟರೆಂದು ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುತ್ತಿದ್ದಾರೆ. ಇದು ಪ್ರವಚನಗಳ ಆರಂಭದಲ್ಲಿ ಮತ್ತು ವಿವಾಹದ ಪ್ರವಚನ, ಶುಕ್ರವಾರದ ಪ್ರವಚನ ಮುಂತಾದ ಅಗತ್ಯದ ಪ್ರವಚನಗಳಿಗೆ ಮುಂಚೆ ಪಠಿಸಲಾಗುವ ವಾಕ್ಯಗಳಾಗಿವೆ. ಎಲ್ಲಾ ರೀತಿಯ ಸ್ತುತಿ-ಪ್ರಶಂಸೆಗಳಿಗೆ ಅಲ್ಲಾಹು ಮಾತ್ರ ಅರ್ಹನು, ಅವನಿಂದ ಮಾತ್ರ ಸಹಾಯ ಯಾಚಿಸುವುದು, ಪಾಪಗಳನ್ನು ಕ್ಷಮಿಸಲು ಮತ್ತು ನಿರ್ಲಕ್ಷಿಸಲು ಬೇಡುವುದು, ದೇಹದ ಕೆಡುಕುಗಳು ಮುಂತಾದ ಎಲ್ಲಾ ರೀತಿಯ ಕೆಡುಕುಗಳಿಂದ ಅವನಲ್ಲಿ ರಕ್ಷಣೆ ಬೇಡುವುದು ಮುಂತಾದ ಮಹಾನ್ ಅರ್ಥಗಳನ್ನು ಈ ಪ್ರವಚನವು ಒಳಗೊಂಡಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದೇನೆಂದರೆ, ಸನ್ಮಾರ್ಗವು ಅಲ್ಲಾಹನ ಕೈಯಲ್ಲಿದೆ, ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ನಂತರ ಅವರು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂಬ ಏಕದೇವತ್ವದ ಸಾಕ್ಷ್ಯ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂಬ ಪ್ರವಾದಿತ್ವದ ಸಾಕ್ಷ್ಯವನ್ನು ಪಠಿಸಿದರು. ನಂತರ ಮೂರು ಶ್ಲೋಕಗಳನ್ನು ಪಠಿಸಿ ಪ್ರವಚನವನ್ನು ಮುಗಿಸಿದರು. ಈ ಮೂರು ಶ್ಲೋಕಗಳು ಸರ್ವಶಕ್ತನಾದ ಅಲ್ಲಾಹನ ಸಂಪ್ರೀತಿಯನ್ನು ಬಯಸಿ, ಅವನ ಆಜ್ಞೆಗಳನ್ನು ಪಾಲಿಸುವ ಮೂಲಕ ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವ ಮೂಲಕ ಅವನನ್ನು ಭಯಪಡಬೇಕೆಂಬ ಆಜ್ಞೆಯನ್ನು ಒಳಗೊಂಡಿವೆ. ಅದೇ ರೀತಿ ಹೀಗೆ ಅಲ್ಲಾಹನನ್ನು ಭಯಪಟ್ಟು ಜೀವಿಸುವವರಿಗೆ ಸಿಗುವ ಪ್ರತಿಫಲವೇನೆಂದರೆ, ಅವರ ಕರ್ಮಗಳು ಮತ್ತು ಮಾತುಗಳು ಸರಿಯಾಗುತ್ತವೆ, ಅವರ ಪಾಪಗಳನ್ನು ಕ್ಷಮಿಸಲಾಗುತ್ತದೆ ಮತ್ತು ಇಹಲೋಕದಲ್ಲಿ ಅವರಿಗೆ ಶುದ್ಧವಾದ ಜೀವನ ಮತ್ತು ಪರಲೋಕದಲ್ಲಿ ಸ್ವರ್ಗವು ಸಿಗುತ್ತದೆ.
ಮಿಕ್ದಾಮ್ ಬಿನ್ ಮಅದೀಕರಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”
At-Tirmidhiಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಅವರ ನಡುವೆ ಪ್ರೀತಿಯನ್ನು ಹಬ್ಬಿಸುವ ಒಂದು ಮಾರ್ಗವನ್ನು ವಿವರಿಸಿದ್ದಾರೆ. ಅದೇನೆಂದರೆ, ಒಬ್ಬ ವ್ಯಕ್ತಿ ತನ್ನ ಮುಸ್ಲಿಂ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸುವುದು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”
Al-Bukhari and Muslimಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏಳು ವಿನಾಶಕಾರಿ ಅಪರಾಧ ಮತ್ತು ಪಾಪಗಳಿಂದ ದೂರವಿರಲು ಆಜ್ಞಾಪಿಸುತ್ತಿದ್ದಾರೆ. ಅವು ಯಾವುವು ಎಂದು ಅವರೊಡನೆ ಪ್ರಶ್ನಿಸಲಾದಾಗ, ಅವರು ಈ ಕೆಳಗಿನಂತೆ ವಿವರಿಸಿದರು: ಮೊದಲನೆಯದು: ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು. ಅಂದರೆ, ಸರ್ವಶಕ್ತನಾದ ಅಲ್ಲಾಹನಿಗೆ—ಯಾವುದೇ ರೂಪದಲ್ಲಾದರೂ—ಸಮಾನರನ್ನು ಮತ್ತು ಸರಿಸಾಟಿಗಳನ್ನು ನಿಶ್ಚಯಿಸುವುದು. ಅಥವಾ ಆರಾಧನೆಯ ಯಾವುದಾದರೂ ಒಂದು ವಿಧವನ್ನು ಅಲ್ಲಾಹು ಅಲ್ಲದವರಿಗೆ ಅರ್ಪಿಸುವುದು. ಶಿರ್ಕ್ (ಸಹಭಾಗಿತ್ವ) ಅತಿ ಭಯಾನಕ ಪಾಪವಾಗಿರುವುದರಿಂದ ಪ್ರವಾದಿಯವರು ಅದನ್ನು ಮೊಟ್ಟಮೊದಲು ತಿಳಿಸಿದ್ದಾರೆ. ಎರಡನೆಯದು: ಮಾಟಗಾರಿಕೆ (ವಾಮಾಚಾರ) ಮಾಡುವುದು. ಗಂಟುಗಳಲ್ಲಿ ಊದುವುದು, ಮಂತ್ರ ಮಾಡುವುದು, ಪ್ರೇತಗಳನ್ನು ಬಳಸಿ ಚಿಕಿತ್ಸೆ ಮಾಡುವುದು, ಹೊಗೆಯಾಡಿಸುವುದು ಮುಂತಾದ ಎಲ್ಲವೂ ಇದರಲ್ಲಿ ಒಳಪಡುತ್ತವೆ. ಇದರಿಂದಾಗಿ ಕೆಲವೊಮ್ಮೆ ಮಾಟ ಮಾಡಲ್ಪಟ್ಟ ವ್ಯಕ್ತಿ ಸಾಯುತ್ತಾನೆ ಅಥವಾ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಕೆಲವೊಮ್ಮೆ ಇದರಿಂದ ಪತಿ-ಪತ್ನಿಯರ ನಡುವೆ ಒಡಕುಂಟಾಗುತ್ತದೆ. ಇದೊಂದು ಪೈಶಾಚಿಕ ಪ್ರವೃತ್ತಿಯಾಗಿದ್ದು, ಬಹುದೇವಾರಾಧನೆ ಮತ್ತು ದುಷ್ಟಶಕ್ತಿಗಳನ್ನು ತೃಪ್ತಿಪಡಿಸುವ ಮೂಲಕವಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ. ಮೂರನೆಯದು: ಅಲ್ಲಾಹು ಹತ್ಯೆ ಮಾಡಬಾರದೆಂದು ಹೇಳಿದ ಮನುಷ್ಯ ಜೀವಿಯನ್ನು ಆಡಳಿತಗಾರರು ಕಾನೂನುಬದ್ಧವಾಗಿ ಹೊರಡಿಸುವ ಆಜ್ಞೆಯ ಮೂಲಕವಲ್ಲದೆ ಕೊಲೆಗೈಯ್ಯುವುದು. ನಾಲ್ಕನೆಯದು: ಬಡ್ಡಿ ಪಡೆಯುವುದು. ಅದು ನೇರವಾಗಿ ಪಡೆಯುವುದಾಗಿದ್ದರೂ ಅಥವಾ ಬೇರೆ ಯಾವುದಾದರೂ ಪ್ರಯೋಜನಗಳನ್ನು ಪಡೆಯುವ ಮೂಲಕವಾಗಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಐದನೆಯದು: ತಂದೆಯನ್ನು ಕಳಕೊಂಡ ಅಪ್ರಾಪ್ತ ಮಕ್ಕಳ ಆಸ್ತಿಯನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಮತ್ತು ಕಬಳಿಸುವುದು. ಆರನೆಯದು: ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡುವಾಗ ಯುದ್ಧರಂಗದಿಂದ ಪಲಾಯನ ಮಾಡುವುದು. ಏಳನೆಯದು: ಪರಿಶುದ್ಧ ಮತ್ತು ಕುಲೀನ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಮಾಡುವುದು; ಅದೇ ರೀತಿ, ಪುರುಷರ ಮೇಲೂ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”
Abu Dawoodಮನೆಗಳಲ್ಲಿ ನಮಾಝ್ ಮಾಡದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿರೋಧಿಸುತ್ತಾರೆ. ಏಕೆಂದರೆ ಮನೆಯಲ್ಲಿ ನಮಾಝ್ ಮಾಡದಿದ್ದರೆ ಅದು ಸಮಾಧಿಯಾಗಿ ಮಾರ್ಪಡುತ್ತದೆ. ಸಮಾಧಿಯು ನಮಾಝ್ ಮಾಡುವ ಸ್ಥಳವಲ್ಲ. ತಮ್ಮ ಸಮಾಧಿಗೆ ಪದೇ ಪದೇ ಭೇಟಿ ನೀಡುವುದನ್ನು ಮತ್ತು ರೂಢಿಯಾಗಿ ಅಲ್ಲಿ ಒಟ್ಟುಗೂಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುವ ಸಾಧ್ಯತೆಯಿದೆ. ಅವರ ಮೇಲೆ ಸ್ವಲಾತ್ ಮತ್ತು ಸಲಾಂ ಹೇಳಲು ಆದೇಶಿಸಿದ್ದಾರೆ. ಅದನ್ನು ಭೂಮಿಯ ಯಾವುದೇ ಭಾಗದಿಂದ ಹೇಳಬಹುದು. ಹತ್ತಿರದಿಂದ ಹೇಳಿದರೂ, ದೂರದಿಂದ ಹೇಳಿದರೂ ಅದು ಅವರಿಗೆ ತಲುಪುತ್ತದೆ. ಸಲಾಂ ಹೇಳುವುದಕ್ಕಾಗಿ ಪದೇ ಪದೇ ಅವರ ಸಮಾಧಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ.