





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)—ಅವರು ಸತ್ಯವಂತರು ಮತ್ತು ಸತ್ಯವಂತರೆಂದು ಅಂಗೀಕರಿಸಲ್ಪಟ್ಟವರು—ತಿಳಿಸಿದರು: ನಿಶ್ಚಯವಾಗಿಯೂ, ನಿಮ್ಮಲ್ಲಿ ಪ್ರತಿಯೊಬ್ಬನ ಸೃಷ್ಟಿಯನ್ನು ಅವನ ತಾಯಿಯ ಉದರದಲ್ಲಿ ನಲ್ವತ್ತು ದಿನ-ರಾತ್ರಿಗಳ ಕಾಲ 'ನುತ್ಫ'ದ (ವೀರ್ಯದ) ರೂಪದಲ್ಲಿ ಜೋಡಿಸಿಡಲಾಗುತ್ತದೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಅಲಕ'ದ (ಹೆಪ್ಪುಗಟ್ಟಿದ ರಕ್ತದ) ರೂಪದಲ್ಲಿರುತ್ತಾನೆ. ನಂತರ ಅಷ್ಟೇ ಅವಧಿಯವರೆಗೆ ಅವನು 'ಮುದ್ಗ'ದ (ಮಾಂಸ ಮುದ್ದೆಯ) ರೂಪದಲ್ಲಿರುತ್ತಾನೆ. ನಂತರ ಅವನ ಬಳಿಗೆ ಒಬ್ಬ ದೇವದೂತರನ್ನು ಕಳುಹಿಸಿ, ನಾಲ್ಕು ವಿಷಯಗಳನ್ನು ಬರೆಯುವಂತೆ ಆಜ್ಞಾಪಿಸಲಾಗುತ್ತದೆ. ದೇವದೂತರು ಅವನ ಜೀವನೋಪಾಯ, ಆಯುಷ್ಯ, ಕರ್ಮ ಮತ್ತು ಅವನು ನತದೃಷ್ಟನೋ ಅಥವಾ ಅದೃಷ್ಟವಂತನೋ ಎಂಬುದನ್ನು ಬರೆಯುತ್ತಾರೆ. ನಂತರ ಅವರು ಅವನಿಗೆ ಆತ್ಮವನ್ನು ಊದುತ್ತಾರೆ. ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ಸ್ವರ್ಗದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ನರಕವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ನರಕವನ್ನು ಪ್ರವೇಶಿಸುತ್ತಾನೆ. ಅದೇ ರೀತಿ, ನಿಶ್ಚಯವಾಗಿಯೂ, ನಿಮ್ಮಲ್ಲೊಬ್ಬನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಮತ್ತು ನರಕದ ಮಧ್ಯೆ ಒಂದು ಮೊಳದಷ್ಟು ಮಾತ್ರ ಅಂತರವಿರುವಾಗ ಅವನ ಗ್ರಂಥವು (ವಿಧಿ-ಬರಹ) ಅವನಿಗಿಂತ ಮುಂದೆ ಬಂದು ಅವನು ಸ್ವರ್ಗವಾಸಿಗಳ ಕರ್ಮವನ್ನು ಮಾಡುತ್ತಾನೆ. ನಂತರ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ."
Al-Bukhari and Muslimಇಬ್ನ್ ಮಸ್ಊದ್ ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ತಿಳಿಸಿದರು. ಅವರು ಮಾತಿನಲ್ಲಿ ಸತ್ಯವಂತರಾಗಿದ್ದಾರೆ ಮತ್ತು ಅಂಗೀಕರಿಸಲ್ಪಟ್ಟವರಾಗಿದ್ದಾರೆ—ಅಂದರೆ ಅಲ್ಲಾಹು ಅವರನ್ನು ಸತ್ಯವಂತರೆಂದು ಅಂಗೀಕರಿಸಿದ್ದಾನೆ. ಅವರು ಹೇಳಿದರು: ನಿಮ್ಮಲ್ಲಿ ಪ್ರತಿಯೊಬ್ಬರನ್ನು ಜೋಡಿಸಲಾಗುವುದು. ಅಂದರೆ ಒಬ್ಬ ವ್ಯಕ್ತಿ ತನ್ನ ಪತ್ನಿಯೊಡನೆ ಸಂಭೋಗಿಸಿದರೆ ಆತನ ವೀರ್ಯವು ಮಹಿಳೆಯ ಗರ್ಭಾಶಯದಲ್ಲಿ ನಲ್ವತ್ತು ದಿನಗಳ ಕಾಲ ನುತ್ಫದ (ಮಿಶ್ರಿತ ವೀರ್ಯದ) ರೂಪದಲ್ಲಿ ಜೋಡಣೆಯಾಗುತ್ತದೆ. ನಂತರ ಮುಂದಿನ ನಲ್ವತ್ತು ದಿನಗಳ ಕಾಲ ಅದು ಅಲಕದ ರೂಪದಲ್ಲಿ, ಅಂದರೆ ಹೆಪ್ಪುಗಟ್ಟಿದ ರಕ್ತದ ರೂಪದಲ್ಲಿರುತ್ತದೆ. ನಂತರ ಮುಂದಿನ ನಲ್ವತ್ತು ದಿನಗಳ ಕಾಲ ಅದು ಮುದ್ಗದ ರೂಪದಲ್ಲಿ, ಅಂದರೆ ಮಾಂಸದ ಮುದ್ದೆಯ ರೂಪದಲ್ಲಿರುತ್ತದೆ. ನಲ್ವತ್ತು ದಿನಗಳ ಮೂರನೆಯ ಅವಧಿಯು ಮುಗಿದಾಗ ಅಲ್ಲಿಗೆ ಒಬ್ಬ ದೇವದೂತರನ್ನು ಕಳುಹಿಸಲಾಗುತ್ತದೆ. ಅವರು ಅದಕ್ಕೆ ಆತ್ಮವನ್ನು ಊದುತ್ತಾರೆ. ನಾಲ್ಕು ವಿಷಯಗಳನ್ನು ಬರೆಯುವಂತೆ ಆ ದೇವದೂತರಿಗೆ ಆಜ್ಞಾಪಿಸಲಾಗುತ್ತದೆ: ಅವನ ಜೀವನೋಪಾಯ. ಅಂದರೆ ಅವನು ತನ್ನ ಆಯುಷ್ಯದಲ್ಲಿ ಪಡೆಯುವ ಅನುಗ್ರಹಗಳ ಪ್ರಮಾಣ. ಅವರ ಆಯುಷ್ಯ. ಅಂದರೆ ಅವನು ಇಹಲೋಕದಲ್ಲಿ ಎಷ್ಟು ವರ್ಷ ಬದುಕುತ್ತಾನೆ. ಅವನ ಕರ್ಮ. ಅಂದರೆ ಅವನು ಏನು ಕರ್ಮ ಮಾಡುತ್ತಾನೆ? ಅವನು ನತದೃಷ್ಟನೋ ಅಥವಾ ಅದೃಷ್ಟವಂತನೋ? ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡಿ ಹೇಳುವುದೇನೆಂದರೆ, ಒಬ್ಬ ವ್ಯಕ್ತಿ ಸ್ವರ್ಗವಾಸಿಗಳು ಮಾಡುವ ಕರ್ಮಗಳನ್ನು ಮಾಡುತ್ತಾನೆ. ಅಂದರೆ ಜನರ ದೃಷ್ಟಿಯಲ್ಲಿ ಅವನ ಕರ್ಮಗಳು ಉತ್ತಮವಾಗಿರುತ್ತವೆ. ಹೀಗೆ ಅವನ ಮತ್ತು ಸ್ವರ್ಗದ ಮಧ್ಯೆ ಒಂದು ಮೊಳ ಅಂತರವಿರುವ ತನಕ ಅವನು ಹೀಗೆಯೇ ಇರುತ್ತಾನೆ. ಅಂದರೆ, ಅವನು ಸ್ವರ್ಗವನ್ನು ಪ್ರವೇಶ ಮಾಡಲು ಒಂದು ಮೊಳದಷ್ಟು ದೂರ ಮಾತ್ರ ಬಾಕಿ ಇರುತ್ತದೆ. ಆಗ ಅವನ ವಿಧಿಯು ಅವನ ಮುಂಭಾಗಕ್ಕೆ ಬಂದು ಅವನು ನರಕವಾಸಿಗಳ ಕರ್ಮಗಳನ್ನು ಮಾಡುತ್ತಾನೆ. ಹೀಗೆ ಅವನ ಕೊನೆಯ ಕರ್ಮವು ನರಕವಾಸಿಗಳ ಕರ್ಮವಾಗಿದ್ದು ಅವನು ನರಕವನ್ನು ಪ್ರವೇಶಿಸುತ್ತಾನೆ. ಏಕೆಂದರೆ ನಿರಂತರ ಸತ್ಕರ್ಮ ಮಾಡುವುದು ಮತ್ತು ನಿಲುವಿನಲ್ಲಿ ಬದಲಾವಣೆ ಮಾಡದಿರುವುದು ಕರ್ಮಗಳ ಸ್ವೀಕಾರಕ್ಕೆ ಷರತ್ತಾಗಿದೆ. ಇನ್ನೊಬ್ಬ ವ್ಯಕ್ತಿ ನರಕವಾಸಿಗಳ ಕರ್ಮಗಳನ್ನು ಮಾಡುತ್ತಾ ಇರುತ್ತಾನೆ. ಹೀಗೆ ಅವನು ನರಕವನ್ನು ಸಮೀಪಿಸುವಷ್ಟರಲ್ಲಿ, ಅಂದರೆ ಅವನ ಮತ್ತು ನರಕದ ನಡುವೆ ಒಂದು ಮೊಳ ಮಾತ್ರ ದೂರವಿರುವಾಗ, ಅವನ ವಿಧಿಯು ಅವನ ಮುಂಭಾಗಕ್ಕೆ ಬಂದು ಅವನು ಸ್ವರ್ಗವಾಸಿಗಳ ಕರ್ಮಗಳನ್ನು ಮಾಡುತ್ತಾನೆ. ಹೀಗೆ ಅವನ ಕೊನೆಯ ಕರ್ಮವು ಸ್ವರ್ಗವಾಸಿಗಳ ಕರ್ಮವಾಗಿದ್ದು ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ.
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ನನ್ನ ಹೊರತು ಯಾರೂ ನಿಮಗೆ ತಿಳಿಸಿಕೊಡದ ಒಂದು ಹದೀಸನ್ನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾನು ನಿಮಗೆ ತಿಳಿಸಿಕೊಡುತ್ತೇನೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ನಿಶ್ಚಯವಾಗಿಯೂ ಜ್ಞಾನ ಎತ್ತಲಾಗುವುದು, ಅಜ್ಞಾನ ಹೆಚ್ಚಾಗುವುದು, ವ್ಯಭಿಚಾರ ಹೆಚ್ಚಾಗುವುದು, ಮಧ್ಯಪಾನ ಹೆಚ್ಚಾಗುವುದು, ಪುರುಷರು ಕಡಿಮೆಯಾಗಿ ಮಹಿಳೆಯರು ಹೆಚ್ಚಾಗುವುದು, ಎಲ್ಲಿಯವರೆಗೆಂದರೆ ಐವತ್ತು ಮಹಿಳೆಯರನ್ನು ನೋಡಿಕೊಳ್ಳಲು ಒಬ್ಬ ಪುರುಷ ಮಾತ್ರವಿರುವುದು ಪ್ರಳಯದ ಚಿಹ್ನೆಗಳಾಗಿವೆ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಳಯವು ಹತ್ತಿರವಾಗುತ್ತಿರುವ ಚಿಹ್ನೆಗಳನ್ನು ವಿವರಿಸಿದ್ದಾರೆ. ಆಗ ವಿದ್ವಾಂಸರ ಮರಣದಿಂದಾಗಿ ಧಾರ್ಮಿಕ ಜ್ಞಾನವನ್ನು ಎತ್ತಲಾಗುತ್ತದೆ. ಇದರ ಪರಿಣಾಮವಾಗಿ ಅಜ್ಞಾನವು ಹೆಚ್ಚಾಗಿ ವ್ಯಾಪಕವಾಗಿ ಹರಡಿಕೊಳ್ಳುತ್ತದೆ, ವ್ಯಭಿಚಾರ ಮತ್ತು ಅಶ್ಲೀಲತೆಗಳು ವ್ಯಾಪಕವಾಗುತ್ತವೆ, ಮಧ್ಯಪಾನ ಹೆಚ್ಚಾಗುತ್ತದೆ, ಪುರುಷರ ಸಂಖ್ಯೆ ಕಡಿಮೆಯಾಗಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತದೆ. ಎಲ್ಲಿಯವರೆಗೆಂದರೆ ಐವತ್ತು ಮಹಿಳೆಯರ ಉಸ್ತುವಾರಿ ಮತ್ತು ಯೋಗಕ್ಷೇಮ ನೋಡಿಕೊಳ್ಳಲು ಒಬ್ಬ ಪುರುಷ ಮಾತ್ರ ಇರುತ್ತಾನೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಯಹೂದಿಗಳೊಡನೆ ಯುದ್ಧ ಮಾಡುವ ತನಕ ಮತ್ತು ಒಂದು ಬಂಡೆಯು ಅದರ ಹಿಂದೆ ಅಡಗಿರುವ ಯಹೂದಿಯನ್ನು ತೋರಿಸಿ, "ಓ ಮುಸಲ್ಮಾನನೇ! ಇಗೋ ನನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ. ಅವನನ್ನು ಕೊಲ್ಲು" ಎಂದು ಹೇಳುವ ತನಕ ಪ್ರಳಯವು ಸಂಭವಿಸುವುದಿಲ್ಲ."
Al-Bukhari and Muslimಮುಸಲ್ಮಾನರು ಯಹೂದಿಗಳೊಡನೆ ಯುದ್ಧ ಮಾಡುವ ತನಕ ಪ್ರಳಯ ಸಂಭವಿಸುವುದಿಲ್ಲ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆ. ಎಲ್ಲಿಯವರೆಗೆಂದರೆ ಒಬ್ಬ ಯಹೂದಿ ಯುದ್ಧದಿಂದ ಪಲಾಯನ ಮಾಡಿ ಒಂದು ಬಂಡೆಯ ಹಿಂದೆ ಅಡಗಿ ಕುಳಿತರೆ, ಅಲ್ಲಾಹು ಆ ಬಂಡೆಗೆ ಮಾತನಾಡುವ ಶಕ್ತಿಯನ್ನು ನೀಡಿ ಅದು ಮುಸಲ್ಮಾನನನ್ನು ಕೂಗಿ ಕರೆದು ತನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ ಎಂದು ಹೇಳುವವರೆಗೆ ಮತ್ತು ಆ ಮುಸಲ್ಮಾನನು ಅವನನ್ನು ಕೊಲ್ಲುವವರೆಗೆ ಪ್ರಳಯವು ಸಂಭವಿಸುವುದಿಲ್ಲ.
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಹೌದ್ (ಕೊಳ) ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಬೆಳ್ಳಗೆ ಮತ್ತು ಅದರ ಪರಿಮಳ ಕಸ್ತೂರಿಗಿಂತಲೂ ಉತ್ತಮವಾಗಿದೆ. ಅದರ ಲೋಟಗಳು ಆಕಾಶದಲ್ಲಿರುವ ನಕ್ಷತ್ರಗಳಂತಿವೆ. ಯಾರು ಅದರ ನೀರನ್ನು ಕುಡಿಯುತ್ತಾರೋ ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನ ಅವರಿಗೆ ಒಂದು ಕೊಳ (ಹೌದ್) ಇರಲಿದೆ. ಅದರ ಉದ್ದ ಮತ್ತು ಅಗಲ ಒಂದು ತಿಂಗಳ ಪ್ರಯಾಣದಷ್ಟಿದೆ. ಅದರ ನೀರು ಹಾಲಿಗಿಂತಲೂ ಹೆಚ್ಚು ಬೆಳ್ಳಗಿದೆ. ಅದರ ಪರಿಮಳವು ಕಸ್ತೂರಿಯ ಪರಿಮಳಕ್ಕಿಂತಲೂ ಉತ್ತಮ ಮತ್ತು ಆಹ್ಲಾದಕರವಾಗಿದೆ. ಅದರ ಲೋಟಗಳು ಆಕಾಶದಲ್ಲಿರುವ ನಕ್ಷತ್ರಗಳ ಸಂಖ್ಯೆಯಷ್ಟಿವೆ. ಆ ಲೋಟಗಳ ಮೂಲಕ ಆ ಕೊಳದ ನೀರನ್ನು ಕುಡಿಯುವವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ.
ಅಸ್ಮಾ ಬಿಂತ್ ಅಬೂಬಕರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ನಾನು ನನ್ನ ಕೊಳದ ಬಳಿಯಿದ್ದು ನೀವು ಅದರ ನೀರು ಕುಡಿಯಲು ಬರುವುದನ್ನು ನಾನು ನೋಡುತ್ತೇನೆ. ಆದರೆ ಕೆಲವು ಜನರನ್ನು ಅಲ್ಲಿಗೆ ಬರದಂತೆ ತಡೆಹಿಡಿಯಲಾಗುತ್ತದೆ. ಆಗ ನಾನು ಹೇಳುತ್ತೇನೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು." ಆಗ ನನ್ನೊಂದಿಗೆ ಹೇಳಲಾಗುತ್ತದೆ: "ನಿಮ್ಮ ನಂತರ ಅವರು ಏನು ಮಾಡಿದ್ದಾರೆಂದು ನಿಮಗೆ ಗೊತ್ತಿದೆಯೇ? ಅಲ್ಲಾಹನಾಣೆ! ಅವರು ಬಹಳ ಬೇಗ ತಮ್ಮ ಹಿಮ್ಮಡಿಗಳಲ್ಲಿ ಮರಳಿಹೋಗಿದ್ದರು."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನದಂದು ಅವರು ಅವರ ಕೊಳದ ಬಳಿಯಿದ್ದು ಅವರ ಸಮುದಾಯದಲ್ಲಿ ಸೇರಿದವರು ಅಲ್ಲಿಗೆ ಬರುವುದನ್ನು ನೋಡುತ್ತಾ ಇರುತ್ತಾರೆ. ಅವರ ಸಮೀಪಕ್ಕೆ ಬಂದ ಕೆಲವು ಜನರನ್ನು ತಡೆಯಲಾಗುತ್ತದೆ. ಆಗ ಅವರು ಹೇಳುತ್ತಾರೆ: "ಓ ನನ್ನ ಪರಿಪಾಲಕನೇ! ಅವರು ನನ್ನವರು ಮತ್ತು ನನ್ನ ಸಮುದಾಯದವರು." ಆಗ ಅವರೊಡನೆ ಹೀಗೆ ಹೇಳಲಾಗುತ್ತದೆ: "ತಾವು ಇಹಲೋಕಕ್ಕೆ ವಿದಾಯ ಕೋರಿದ ನಂತರ ಅವರು ಏನು ಮಾಡಿದರೆಂದು ನಿಮಗೆ ಗೊತ್ತಿದೆಯೇ? ಅಲ್ಲಾಹನಾಣೆ! ಅವರು ತಮ್ಮ ಹಿಮ್ಮಡಿಗಳಲ್ಲಿ ಮರಳಿ ಧರ್ಮದಿಂದ ಹಿಂದೆ ಸರಿದರು. ಆದ್ದರಿಂದ ಅವರು ನಿಮ್ಮವರಲ್ಲ ಮತ್ತು ನಿಮ್ಮ ಸಮುದಾಯದವರೂ ಅಲ್ಲ."
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಕೊಳದ ಪಾತ್ರೆಗಳು ಯಾವುವು?" ಅವರು ಉತ್ತರಿಸಿದರು: "ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಅದರ ಪಾತ್ರೆಗಳು ಆಕಾಶದಲ್ಲಿ ಕಡುಗತ್ತಲೆಯ ಮೋಡ ರಹಿತ ರಾತ್ರಿಯಲ್ಲಿ ಬೆಳಗುವ ನಕ್ಷತ್ರ ಮತ್ತು ತಾರೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಅವು ಸ್ವರ್ಗದ ಪಾತ್ರೆಗಳಾಗಿದ್ದು ಅದರಿಂದ ಕುಡಿಯುವವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ. ಸ್ವರ್ಗದಿಂದ ಎರಡು ತೊರೆಗಳ ಮೂಲಕ ಅದಕ್ಕೆ ನೀರು ಹರಿದು ಬರುತ್ತದೆ. ಅದರ ನೀರು ಕುಡಿದವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ. ಅದರ ಉದ್ದವು ಅದರ ಅಗಲದಷ್ಟೇ ಇದೆ. ಅಮ್ಮಾನ್ನಿಂದ ಐಲದವರೆಗೆ. ಅದರ ನೀರು ಹಾಲಿಗಿಂತಲೂ ಕಡು ಬೆಳ್ಳಗಿನ ಬಣ್ಣವನ್ನು ಹೊಂದಿದೆ ಮತ್ತು ಜೇನಿಗಿಂತಲೂ ಸಿಹಿಯಾಗಿದೆ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆಣೆ ಮಾಡಿ ಹೇಳುವುದೇನೆಂದರೆ, ಪುನರುತ್ಥಾನ ದಿನದಂದು ಅವರ ಕೊಳದ ಪಾತ್ರೆಗಳು ಆಕಾಶದಲ್ಲಿರುವ ನಕ್ಷತ್ರ ಮತ್ತು ತಾರೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಅಂದರೆ, ಕಾರ್ಗತ್ತಲೆಯ ಚಂದ್ರನಿಲ್ಲದ ರಾತ್ರಿಯಲ್ಲಿ ಗೋಚರವಾಗುವ ನಕ್ಷತ್ರಗಳು ಮತ್ತು ತಾರೆಗಳು. ಏಕೆಂದರೆ ಬೆಳದಿಂಗಳ ರಾತ್ರಿಯಲ್ಲಿ ಚಂದ್ರನ ಬೆಳಕಿನಿಂದಾಗಿ ನಕ್ಷತ್ರಗಳು ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಅದೇ ರೀತಿ ಮೋಡಗಳಿಲ್ಲದ ರಾತ್ರಿಯಲ್ಲಿ. ಏಕೆಂದರೆ ಮೋಡಗಳಿದ್ದರೆ ಅವು ನಕ್ಷತ್ರಗಳನ್ನು ಮರೆಮಾಚುತ್ತವೆ. ಅವು ಸ್ವರ್ಗದ ಪಾತ್ರೆಗಳಾಗಿದ್ದು ಯಾರು ಅದರಿಂದ ನೀರನ್ನು ಕುಡಿಯುತ್ತಾರೋ ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ. ಮತ್ತು ಅದೇ ಅವರ ಕೊನೆಯ ದಾಹವಾಗಿದೆ. ಅವರ ಕೊಳಕ್ಕೆ ಸ್ವರ್ಗದ ಎರಡು ತೊರೆಗಳಿಂದ ನೀರು ಹರಿದು ಬರುತ್ತದೆ. ಅದರ ಉದ್ದ ಮತ್ತು ಅಗಲ ಸಮಾನವಾಗಿವೆ. ಕೊಳದ ಅಂಚುಗಳು ಸಮಾನ ದೂರದಲ್ಲಿವೆ. ಅದರ ಉದ್ದವು ಸುಮಾರು ಅಮ್ಮಾನ್ನಿಂದ (ಸಿರಿಯಾದ ಬಲ್ಕಾದಲ್ಲಿರುವ ಒಂದು ಊರು) ಐಲದವರೆಗಿನ (ಸಿರಿಯಾದ ಹೊರವಲಯದಲ್ಲಿರುವ ಒಂದು ಪ್ರಸಿದ್ಧ ನಗರ) ದೂರವನ್ನು ಹೊಂದಿದೆ. ಕೊಳದ ನೀರು ಹಾಲಿಗಿಂತಲೂ ಹೆಚ್ಚು ಬೆಳ್ಳಗಿದೆ ಮತ್ತು ಅದರ ರುಚಿಯು ಜೇನಿಗಿಂತಲೂ ಹೆಚ್ಚು ಸಿಹಿಯಾಗಿದೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಉರಿಸುವ ಬೆಂಕಿ ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ." ಆಗ ಒಬ್ಬರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಈ ಬೆಂಕಿಯೇ ಸಾಕಷ್ಟು ಬಿಸಿಯಾಗಿದೆ." ಅವರು ಹೇಳಿದರು: "ಈ ಬೆಂಕಿಗೆ ಅರುವತ್ತೊಂಬತ್ತು ಭಾಗಗಳನ್ನು ಸೇರಿಸಲಾಗುತ್ತದೆ. ಪ್ರತಿಯೊಂದು ಭಾಗವೂ ಅದರಷ್ಟೇ ಉರಿಯನ್ನು ಹೊಂದಿದೆ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕದ ಬೆಂಕಿಯು ನರಕದ ಬೆಂಕಿಯ ಎಪ್ಪತ್ತನೇ ಒಂದು ಭಾಗವಾಗಿದೆ. ಅಂದರೆ, ಪರಲೋಕದ ಬೆಂಕಿಯು ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಪಟ್ಟು ಹೆಚ್ಚು ಉರಿಯುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿದೆ. ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನರಕವಾಸಿಗಳನ್ನು ಶಿಕ್ಷಿಸಲು ಇಹಲೋಕದ ಬೆಂಕಿ ಸಾಕಷ್ಟು ಉರಿಯನ್ನು ಹೊಂದಿದೆಯಲ್ಲವೇ!" ಆಗ ಅವರು ಹೇಳಿದರು: "ಪರಲೋಕದ ಬೆಂಕಿಗೆ ಇಹಲೋಕದ ಬೆಂಕಿಗಿಂತ ಅರುವತ್ತೊಂಬತ್ತು ಭಾಗ ಹೆಚ್ಚು ಉರಿಯನ್ನು ನೀಡಲಾಗಿದೆ. ಪ್ರತಿಯೊಂದು ಭಾಗವೂ ಇಹಲೋಕದ ಬೆಂಕಿಯಷ್ಟೇ ಉರಿಯನ್ನು ಹೊಂದಿವೆ."
ಝಿಯಾದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಿಷಯವನ್ನು ಪ್ರಸ್ತಾಪಿಸುತ್ತಾ ಹೇಳಿದರು: "ಅದು ಜ್ಞಾನವು ಹೊರಟುಹೋಗುವ ಸಮಯದಲ್ಲಾಗಿದೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಜ್ಞಾನವು ಹೊರಟುಹೋಗುವುದು ಹೇಗೆ? ನಾವಂತೂ ಕುರ್ಆನ್ ಪಠಿಸುತ್ತೇವೆ ಮತ್ತು ನಮ್ಮ ಮಕ್ಕಳಿಗೆ ಪಠಿಸಲು ಕಲಿಸುತ್ತಿದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಿಗೆ ಅದರ ಪಠಣವನ್ನು ಕಲಿಸುತ್ತಾರೆ ಹೀಗೆ ಪುನರುತ್ಥಾನ ದಿನದ ತನಕ ನಡೆಯುತ್ತದೆಯಲ್ಲವೇ?" ಅವರು ಹೇಳಿದರು: "ತಮ್ಮ ತಾಯಿ ತಮ್ಮನ್ನು ಕಳೆದುಕೊಳ್ಳಲಿ. ಓ ಝಿಯಾದ್! ನಾನು ತಮ್ಮನ್ನು ಮದೀನದಲ್ಲಿ ಅತ್ಯಧಿಕ ಪಾಂಡಿತ್ಯವಿರುವ ವ್ಯಕ್ತಿ ಎಂದು ಭಾವಿಸಿದ್ದೆ. ಈ ಯಹೂದಿಗಳು ಮತ್ತು ಕ್ರೈಸ್ತರು ತೌರಾತ್ ಮತ್ತು ಇಂಜೀಲನ್ನು ಪಠಿಸುವುದಿಲ್ಲವೇ? ಆದರೆ ಅವರು ಅದರಲ್ಲಿರುವಂತೆ ಅನುಸರಿಸುತ್ತಿರುವರೇ?"
Ibn Maajahಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಂಗಡಿಗರ ನಡುವೆ ಕುಳಿತುಕೊಂಡಿದ್ದರು. ಆಗ ಅವರು ಹೇಳಿದರು: "ಇಂತಿಂತಹ ಸಮಯದಲ್ಲಿ ಜನರಿಂದ ಜ್ಞಾನವನ್ನು ಎತ್ತಿಕೊಳ್ಳಲಾಗುವುದು ಮತ್ತು ಹಿಂಪಡೆಯಲಾಗುವುದು." ಆಗ ಝಿಯಾದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಆಶ್ಚರ್ಯವಾಯಿತು. ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಮ್ಮಿಂದ ಜ್ಞಾನವು ಎತ್ತಲಾಗುವುದು ಮತ್ತು ನಾವು ಅದನ್ನು ಕಳೆದುಕೊಳ್ಳುವುದು ಹೇಗೆ? ನಾವಂತೂ ಕುರ್ಆನ್ ಪಠಿಸಿದ್ದೇವೆ ಮತ್ತು ಕಂಠಪಾಠ ಮಾಡಿದ್ದೇವೆ. ಅಲ್ಲಾಹನಾಣೆ! ನಾವು ಅದನ್ನು ಪಠಿಸುತ್ತಲೇ ಇರುತ್ತೇವೆ. ನಮ್ಮ ಮಹಿಳೆಯರಿಗೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಅದನ್ನು ಕಲಿಸುತ್ತಲೇ ಇರುತ್ತೇವೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಶ್ಚರ್ಯದಿಂದ ಕೇಳಿದರು: "ನಿಮ್ಮ ತಾಯಿ ನಿಮ್ಮನ್ನು ಕಳೆದುಕೊಳ್ಳಲಿ. ಓ ಝಿಯಾದ್! ನಾನು ತಮ್ಮನ್ನು ಮದೀನದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಿದ್ದೆ!" ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ವಿವರಿಸುತ್ತಾ ಹೇಳಿದರು: "ಜ್ಞಾನವು ಕಳೆದುಹೋಗುವುದು ಕುರ್ಆನ್ ಕಳೆದುಹೋಗುವುದರಿಂದಲ್ಲ. ಬದಲಿಗೆ, ಜ್ಞಾನವು ಕಳೆದುಹೋಗುವುದು ಅದರಂತೆ ಕರ್ಮ ಮಾಡದಿರುವಾಗ. ಯಹೂದಿಗಳ ಮತ್ತು ಕ್ರೈಸ್ತರ ಬಳಿ ಈ ತೌರಾತ್ ಮತ್ತು ಇಂಜೀಲ್ ಇದೆ. ಆದರೂ ಅವರಿಗೆ ಅದು ಪ್ರಯೋಜನ ನೀಡುವುದಿಲ್ಲ. ಅದರ ಉದ್ದೇಶಕ್ಕಾಗಿ ಅವರು ಅದನ್ನು ಬಳಸಲಿಲ್ಲ. ಅಂದರೆ ಅದರಿಂದ ಅವರು ಪಡೆದ ಜ್ಞಾನದ ಪ್ರಕಾರ ಅವರು ಕರ್ಮವೆಸಗಲಿಲ್ಲ.
ತಾವೂಸ್ ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನೇಕ ಸಂಗಡಿಗರನ್ನು ಭೇಟಿಯಾಗಿದ್ದೇನೆ. ಎಲ್ಲವೂ ವಿಧಿ ನಿರ್ಣಯವೆಂದು ಅವರು ಹೇಳುತ್ತಿದ್ದರು. ಅವರು ಹೇಳಿದರು: ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ. ನಿಶಕ್ತಿ ಮತ್ತು ಉತ್ಸಾಹ, ಅಥವಾ ಉತ್ಸಾಹ ಮತ್ತು ನಿಶಕ್ತಿ ಕೂಡ.”
Muslimಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ನಿಶಕ್ತಿಯೂ ಕೂಡ. ನಿಶಕ್ತಿಯೆಂದರೆ ಕಡ್ಡಾಯವಾಗಿರುವುದನ್ನು ಮಾಡದಿರುವುದು, ಅದನ್ನು ಮುಂದೂಡುವುದು, ಅಥವಾ ಅದರ ನಿಶ್ಚಿತ ಸಮಯದ ಬಳಿಕ ನಿರ್ವಹಿಸುವುದು. ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ವಿಷಯಗಳೆಲ್ಲವೂ ಇದರಲ್ಲಿ ಒಳಪಡುತ್ತವೆ. ಅದೇ ರೀತಿ ಉತ್ಸಾಹವು ಕೂಡ. ಉತ್ಸಾಹ ಎಂದರೆ ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಆವೇಶ ಮತ್ತು ಪರಿಣತಿ ಹೊಂದಿರುವುದು. ಸರ್ವಶಕ್ತನಾದ ಅಲ್ಲಾಹು ನಿಶಕ್ತಿ, ಉತ್ಸಾಹ ಮುಂತಾದ ಎಲ್ಲವನ್ನು ನಿರ್ಣಯಿಸಿದ್ದಾನೆ. ಅಲ್ಲಾಹನ ಜ್ಞಾನ ಮತ್ತು ಇಚ್ಛೆಯಲ್ಲಿರುವುದಲ್ಲದೆ ಜಗತ್ತಿನಲ್ಲಿ ಬೇರೇನೂ ಸಂಭವಿಸುವುದಿಲ್ಲ.